ಪೋಸ್ಟ್‌ಗಳು

ಮುಂಜಾನೆ ಮಂಜಲ್ಲಿ - ಕಾಲೇಜು ಪ್ರೇಮ ಕಥೆ (ಭಾಗ 1)

ಇಮೇಜ್
"ಮುಂಜಾನೆ ಮಂಜಲ್ಲಿ
ಮುಸ್ಸಂಜೆ ತಿಳಿ ತಂಪಲ್ಲಿ
ಓ ಒಲವೇ.. ನೀನೆಲ್ಲಿ
ಹುಡುಕಾಟ ನಿನಗಿನ್ನೆಲ್ಲಿ.."

ಕಾಲೇಜ್ Fresher's dayಯಲ್ಲಿ ಈ ಹಾಡು ತೇಲಿಬರುತ್ತಿದ್ದರೆ ಸೂರ್ಯ ಅವನ ಒಲವನ್ನು ಹುಡುಕುತ್ತಿದ್ದ. ಕಾಲೇಜಿಗೆ ಬಂದು ಒಂದು ವಾರವಾಗಿತ್ತಷ್ಟೆ.. ಅವಳ ಮೇಲೆ ಪ್ರೀತಿ ಹುಟ್ಟಿ 4 ದಿನ ಆಗಿತ್ತು. ನೋಡಿದೊಡನೆ ಎಂಥವರೂ ಕೂಡ ಮೈಮರೆಯುವಂತಹ ಸೌಂದರ್ಯ ಅವಳದ್ದು. ಅವಳ ಮುದ್ದಾದ ಮುಖ, ಸದಾ ನಗುತ್ತಿದ್ದ ತುಟಿಗಳು, ಚಂಚಲತೆಯಿಂದ ಕೂಡಿದ ಕಣ್ಣುಗಳು, ತಿಳಿ ಆಗಸದಲ್ಲಿ ಹೊಳೆಯುವ ನಕ್ಷತ್ರದಂತೆ ಹೊಳೆಯುತ್ತಿದ್ದ ಮೂಗುತಿ... ಒಟ್ಟಾರೆ ಹೇಳುವುದಾದರೆ ಸೌಂದರ್ಯ ದೇವತೆಯಂತೆ ಇದ್ದಳು.

ಎಲ್ಲಿ ನೋಡಿದರೂ ಅವನ ಮನಸನ್ನು ಕದ್ದ ಚೆಲುವೆ ಕಾಣಲಿಲ್ಲ. Backstageಗೆ ಗೆಳತಿಯರನ್ನು ಮಾತನಾಡಿಸಲು ಹೋಗಿರಬಹುದೆಂದು ಯೋಚಿಸಿ ಸೂರ್ಯ stage ಹಿಂದೆ ಹೋದ. ಅಲ್ಲಿ ನಿಂತಿದ್ದಳು ರಂಭೆಯ ಪ್ರತಿರೂಪದಂತೆ ಇದ್ದ ನಮ್ರತ! ನೀಲಿ ಬಣ್ಣದ ಟಿ-ಶರ್ಟ್ ಹಾಗು ಜೀನ್ಸ್ ಪ್ಯಾಂಟ್ ನಲ್ಲಿ stunning ಆಗಿ ಕಾಣುತ್ತಿದ್ದಳು. ಆದರೆ ಅವಳು ಒಬ್ಬ ಹುಡುಗನೊಂದಿಗೆ ಮಾತನಾಡುತ್ತ ನಿಂತಿದ್ದಳು. ಯಾರವನು? ಅವಳ boyfriend ಇರಬಹುದ? ಅಥವಾ ಅವಳ ಅಣ್ಣನೋ ಸಂಬಂಧಿಕನೋ ಆಗಿರಬಹುದ? ಹೀಗೆ ಹಲವು ಪ್ರಶ್ನೆಗಳು ಅವನ ತಲೆಯನ್ನು ಕೊರೆಯಲು ಶುರುವಾಯಿತು.
ಅವರಿಬ್ಬರು ಅಷ್ಟು close ಆಗಿ ಮಾತನಾಡುತ್ತಿರುವುದನ್ನು ಇವನಿಗೆ ನೋಡಲಾಗಲಿಲ್ಲ. ಡಿಗ್ರಿಯಲ್ಲಾದರೂ ಯಾವುದಾದರೂ ಒಳ್ಳೆ ಹುಡುಗ…

ಮಾನವ ಸ್ವಭಾವ ವಿಚಿತ್ರ ಕಣ್ರೀ! [ಮನದ ಮಾತು]

ಇಮೇಜ್
ಈ ಮಾನವನ ಸ್ವಭಾವ ವಿಚಿತ್ರ ಕಣ್ರೀ. ಯಾಕೆ ಅಂತೀರಾ? ಹೇಳ್ತೀನಿ ಕೇಳಿ. ನಮಗೆ ಕೆಲವರನ್ನು ಕಂಡರೆ ಆಗ್ತಿರಲ್ಲ. ಆದ್ರೆ ಅವರ ಜೊತೆ ಸಮಯ ಕಳೆಯುತ್ತಾ ಹೋದಂತೆ ಅವರು ನಮ್ಮ ಮನಸ್ಸಿಗೆ ಹತ್ತಿರವಾಗ್ಬಿಡ್ತಾರೆ.  ನೀವು ಎಷ್ಟೋ ಸಿನಿಮಾಗಳಲ್ಲಿ ನೋಡಿರಬಹುದು. ನಾಯಕ ನಾಯಕಿಯನ್ನು ಪ್ರೀತಿಸುತ್ತಿರುತ್ತಾನೆ. ಆದರೆ ಹುಡುಗಿ ಅವನ ಕಂಡರೆ ಉರಿದು ಬೀಳ್ತಿರ್ತಾಳೆ. ದಿನ ಕಳೆದಂತೆ ಅವಳಿಗೆ ಅವನ ಮೇಲೆ Love ಆಗುತ್ತೆ. ನಾನು ಕೇವಲ ಹುಡುಗ ಹುಡುಗಿ ಬಗ್ಗೆ ಹೇಳ್ತಾ ಇಲ್ಲ. ಇದು ಒಂದು ಉದಾಹರಣೆ ಅಷ್ಟೇ. ಎಷ್ಟೋ ಜನ ಮೊದಲು ನಮಗೆ ಇಷ್ಟವಿಲ್ಲದವರು ಈಗ ನಮ್ಮ Best friends ಆಗಿರ್ತಾರೆ. ಯಾಕೆ ಮಾನವನ ಸ್ವಭಾವ ಹೀಗೆ? ಈ phenomenon ಗೆ ಹಲವು ಕಾರಣಗಳನ್ನು ನೀಡಬಹುದು.
ಮುಖ್ಯ ಕಾರಣ : ನಿಮಗೆ ಅವರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಕೇವಲ ಒಂದೆರಡು ಭೇಟಿಯಲ್ಲೇ ನೀವು “ಅವರು ಹೀಗೇ” ಎಂದು ಅಂದುಕೊಂಡಿರುತ್ತೀರಿ. ಒಂದೊಮ್ಮೆ ನೀವು ಅವರ ಜೊತೆ ಹೆಚ್ಚು ಕಾಲ ಕಳೆದರೆ ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡು ನೀವು ಅವರನ್ನು ಇಷ್ಟಪಡುವ ಸಾಧ್ಯತೆ ಇರುತ್ತದೆ.
ಮೊದಮೊದಲು ಅವರ ಸ್ವಭಾವ ನಿಮಗೆ ಹಿಡಿಸದೇ ಇರಬಹುದು. ನಂತರ ಅವರೊಂದಿಗೆ ಕಾಲ ಕಳೆಯುತ್ತ ಅವರ ಸ್ವಭಾವ ನಿಮಗೆ ಇಷ್ಟವಾಗಬಹುದು. ಅಥವಾ ನಿಮ್ಮ ಪ್ರಭಾವದಿಂದ ಅವರು ನಿಮಗೆ ಇಷ್ಟವಾಗದ ಸ್ವಭಾವವನ್ನು  ಬದಲಾಯಿಸಿಕೊಳ್ಳಬಹುದು.
ಕೆಲವರಿಗೆ ಬೇರೆಯವರನ್ನು ತಮ್ಮೆಡೆಗೆ ಸೆಳೆಯುವ ವಿಶೇಷ magnetic power ಇರುತ್ತದೆ. …

Kadala Kinaare Smartphone Clikz Photography Contest

ಇಮೇಜ್
Rules, Terms & Conditions for Kadala Kinaare Smartphone Clikz Contest

1) "Kadala Kinaare Smartphone Clikz" competition is promoted by Kadala Kinaare blog (www.kadalakinaare.blogspot.com). Hereafter the promoter is referred to as 'the blog'.
2) The competition is open to residents of Karnataka State only aged 18 years or above.
3) Except persons associated with the blog, others can participate in this contest.
4) There is no entry fee and no purchase necessary to enter this competition.
5) By entering this competition, an entrant is indicating his/her agreement to be bound by these terms and conditions.
6) Only TWO entries will be accepted per person. More than 2 entries from the same person will be disqualified.
7) Contest starts from 6 August 8:30 pm. Closing date for entry will be 31 August 2017 11:59 pm. After this date no further entries to the competition will be accepted.
(Date & time according to IST).
8) No responsibility can be accepted for entries …

[ಕಥೆ] ನೀ ನನ್ನ ಶತ್ರು ಮನವೇ... - ಭಾಗ 2

{{ಈ‌ ಕಥೆಯ ಮೊದಲ ಭಾಗವನ್ನು ಓದಲು ಇಲ್ಲಿ click ಮಾಡಿ.}}

ಮನೆಗೆ ಹೋಗುವಷ್ಟರಲ್ಲಿ ಆತನಿಗೆ ಮತ್ತೊಂದು ಆಘಾತ ಕಾದಿತ್ತು. ಆತ ಮನೆಗೆ ಹೋದಾಗ ಮನೆಯ ಮುಂದೆ ಬಹಳ ಜನ. ಇದನ್ನು ನೋಡಿ ಭರತ್ ಗಾಬರಿಯಿಂದ ಒಳಗೆ ಓಡಿ ಹೋದ. ಆತನ ಮಾವ ಅತ್ತೆ ಎಲ್ಲಾ ಬಂಧುಗಳು ನಿಂತಿದ್ದರು. ಸ್ವಲ್ಪ ಮುಂದೆ ಹೋಗುವುದರಲ್ಲಿ ಆತನ ತಂದೆ ಮಲಗಿದ್ದು , ಅವರ ಮೇಲೆ ಹೂವಿನ ಹಾರಗಳನ್ನು ಹಾಕಿದ್ದು ನೋಡಿ ಹಾಗೇ ನಿಂತುಬಿಟ್ಟ. ಮೊದಲೇ ಆತನ  ಪ್ರೇಯಸಿಯ ವಿಷಯದಲ್ಲಿ ಕಣ್ಣೀರನ್ನು ಖಾಲಿ ಮಾಡಿಕೊಂಡಿದ್ದ. ಅವನ ಕಣ್ಣಿನಲ್ಲಿ ನೀರೇ ಬರದೇ ಬಂಡೆಕಲ್ಲಿನಂತೆ ನಿಂತು ಬಿಟ್ಟ. ಎಲ್ಲರೂ ಆತನನ್ನು ನೋಡಿ ಕಣ್ಣೀರನ್ನು ಒರೆಸಿಕೊಳ್ಳಲು ಮೇಲೆತ್ತಿದ್ದ ತಮ್ಮ ಕೈಯನ್ನು ಕೆಳಗಿಳಿಸಿದರು. ಯಾವುದೋ ಮಂಕಿನಲ್ಲಿ ಇದ್ದ ಭರತ್ ಒಂದೇ ಸಮನೇ ಅಪ್ಪ ಅಪ್ಪ ಅಂತ ಕೂಗತೊಡಗಿದ. ಅವರ ದೇಹದ ಮೇಲೆ ಕೈ ಇಟ್ಟು ಅಪ್ಪ ಎದ್ದೇಳಪ್ಪಾ ಎದ್ದೇಳಪ್ಪಾ ಎಂದು ರೋದಿಸತೊಡಗಿದ. ನಗುವಿನ ದೇವನ ಕಣ್ಣಲ್ಲಿ ಬಾರದೇ ಇರೋ ಕಣ್ಣೀರನ್ನು ಅಳು ದೇವನ ಬಳಿ ಕೊಂಡುಕೊಂಡಂತೆ ಒಂದೇ ಸಮನೆ ಅಳತೊಡಗಿದ. ಕಾರ್ಯ ಮುಗಿಯುವಷ್ಟರಲ್ಲಿ ಕಣ್ಣೀರಿನಲ್ಲೇ ಮುಳುಗಿಹೋಗಿದ್ದ .

------------------------------->>

ಒಂದು ವಾರದ ನಂತರ.......

ದುಃಖದಲ್ಲೇ ಮನೆಯನ್ನು ಗುಡಿಸಬೇಕಾದರೆ ಒಂದು ಪುಸ್ತಕ ಸಿಕ್ಕಿತು. ಏನಿದು ಎಂದು ತೆಗೆದು ಓದಲು ಅವನಿಗೆ ಒಂದು ಆಶ್ಚರ್ಯ ಕಾದಿತ್ತು. ಹೌದು! ಅದು ಅವನ ಸ್ನೇಹಿತನ ಪುಸ್ತಕ.

"ಭರತ್, ನಾನು …

ಲೈಬ್ರರಿಯಲ್ಲಿ ಒಂದು ದಿನ...

ಆ ಒಂದು ದಿನ!

ಪದವಿ ಕಾಲೇಜಿಗೆ ಸೇರಿದೊಡನೆ ನನ್ನನ್ನು ಹೆಚ್ಚು ಆಕರ್ಷಿಸಿದ ಸ್ಥಳವೆಂದರೆ ಗ್ರಂಥಾಲಯ. ಹೌದು! ನನ್ನ ವಯಸ್ಸಿನ ಅದೆಷ್ಟೋ ಹುಡುಗರಿಗೆ ಗ್ರಂಥಾಲಯ ನೆನಪಾಗುವುದು ಪರೀಕ್ಷೆ ಹತ್ತಿರ ಬಂದಾಗ ಮಾತ್ರ. ಆದರೆ ನಾನು ಮಾತ್ರ ಸಬ್ಜೆಕ್ಟ್ ಗಳಿಗೆ ಸಂಬಂಧಪಟ್ಟ ಪುಸ್ತಕಗಳಿಗಿಂತ ಕಥೆ, ಕಾದಂಬರಿಗಳನ್ನೇ ಹೆಚ್ಚು ಓದುತ್ತಿದ್ದೆ.

ಇಂಗ್ಲೀಷ್ ಸಾಹಿತ್ಯ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ನನಗೆ ಅದು ಅನಿವಾರ್ಯವೂ ಆಗಿತ್ತು. ಪದವಿಪೂರ್ವ ತರಗತಿಯವರೆಗೆ ಸರಿಯಾಗಿ ಗ್ರಂಥಾಲಯವನ್ನೇ ಕಾಣದಿದ್ದ ನನಗೆ, ನಾನು ಓದಿದ ಪದವಿಪೂರ್ವ ಸಂಸ್ಥೆಯಷ್ಟೇ ದೊಡ್ಡದಾದ ಗ್ರಂಥಾಲಯವನ್ನು ಕಂಡಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಪ್ರತಿ ದಿನದಂತೆ ಆ ದಿನವೂ ಗ್ರಂಥಾಲಯಕ್ಕೆ ಭೇಟಿ ನೀಡಿದೆ. ಪತ್ರಿಕೋದ್ಯಮದ ಯಾವುದೋ ಒಂದು ಪಾಠ ತುಂಬಾ ಬೋರ್ ಹೊಡೆಯುತ್ತಿದ್ದುದರಿಂದ ಆ ತರಗತಿಗೆ ಚಕ್ಕರ್ ಹೊಡೆದಿದ್ದೆ. ಸ್ನೇಹಿತರಿಗೆ ಹೇಳಿದರೆ ಅವರೂ ಕೂಡ ನನ್ನ ಹಿಂದೆ ಬಾಲದಂತೆ ಬಂದಾರು ಎಂದು ಭಾವಿಸಿ ಅವರಿಗೆ ಯಾವ ಸೂಚನೆಯನ್ನೂ ಕೊಟ್ಟಿರಲಿಲ್ಲ.

ಪ್ರತಿ ದಿನದಂತೆ ನನ್ನ ಆಸಕ್ತಿಗೆ ಪೂರಕವಾಗಿರುವ ಕಥೆ, ಕಾದಂಬರಿ, ನಾಟಕ ವಿಭಾಗಕ್ಕೆ ತೆರಳದೇ ಹೊಸತಾಗಿ ಏನನ್ನಾದರೂ ಪ್ರಯತ್ನಿಸೋಣ ಎಂದು ಮ್ಯಾನೇಜ್ ಮೆಂಟ್ ಪುಸ್ತಕಗಳಿರುವ ವಿಭಾಗಕ್ಕೆ ಹೋದೆ. ಅಲ್ಲಿ Quality and Management ಎನ್ನುವ ಒಂದು ಪುಸ್ತಕ ಆಯ್ದ ಓದಲಾರಂಭಿಸಿದೆ.

ಮೊದಲನೇ ಪುಟದಿಂದ ಹಿಡಿದು ಮೂರು ಪುಟಗಳನ್ನು ಓದಿದ…

[ಕಥೆ] ನೀ ನನ್ನ ಶತ್ರು ಮನವೇ... - ಭಾಗ 1

ನೀ ನನ್ನ ಶತ್ರು ಮನವೇ... - ಭಾಗ 1

ಸುತ್ತಮುತ್ತಲು ಮರ ಗಿಡ, ಮಧ್ಯೆ ಸುಂದರವಾದ ಪುಟ್ಟದೊಂದು ಮನೆ. ಜೀವನಕ್ಕೆ ಹಣದ ಸಮಸ್ಯೆ ಇಲ್ಲ, ಆದ್ರೂ ನೆಮ್ಮದಿ ಇಲ್ಲ. ಇದು ನಮ್ಮ ಕಥೆಯ ನಾಯಕನ ಮನೆಯ ಸ್ಥಿತಿ. ಬಹಳ ಪ್ರೀತಿ ತೋರಿಸೋ ತಂದೆ, ಅದನ್ನು ಪಡೆಯುತ್ತಾ ದಾರಿ ತಪ್ಪುತ್ತಿರುವ ಮಗ. ಅವನು ಚಿಕ್ಕವನಿದ್ದಾಗಲೇ ಅವನ ತಾಯಿ ತೀರಿಕೊಂಡಿದ್ದರು.

  "Bharath, tell something about yourself" ಎಂದು ಲೆಕ್ಚರರ್ ಕೇಳಿದ ಕೂಡಲೇ ಭರತ್ ಎದ್ದು ನಿಂತು ತನ್ನ ಬಗ್ಗೆ ಹೇಳಲಾರಂಭಿಸಿದ. ತನ್ನ ತಂದೆ ಪೊಲೀಸ್...  ಮುಂದೆ ಹೇಳದೆ ಸುಮ್ಮನಾದ. ಆತನಿಗೆ ಸಂಜೆಯಾವಾಗ ಆಗುವುದು ಎಂಬ ಚಿಂತೆ. 19 ವರ್ಷದ ಹುಡುಗ. ಸಂಜೆಯ ಚಿಂತೆ ಕಾಡುತ್ತಿದೆ ಎಂದರೆ ತಂದೆಯನ್ನು ನೋಡುವುದಕ್ಕಲ್ಲ ಅಥವಾ ಮನೆಗೆ ಹೋಗುವುದಕ್ಕೂ ಅಲ್ಲ. ತನ್ನ ಪ್ರೇಯಸಿಯನ್ನು ನೋಡುವುದಕ್ಕೆ. ಆಕೆ ಅವನ ಮನೆಯ ಹತ್ತಿರವೇ ಇದ್ದವಳು. ಸಂಜೆ ನಾಲ್ಕರ ಬೆಲ್ ಹೊಡೆದದ್ದೇ ತಡ, ಸ್ನೇಹಿತರಿಗೆ ಬಾಯ್ ಕೂಡ ಹೇಳದೆ ಓಡಿದ. ಬಹುಶಃ ಅವನ ವೇಗ ನೋಡಿದರೆ ಉಸೇನ್ ಬೋಲ್ಟ್ ಕೂಡ ತಲೆಸುತ್ತಿ ಬೀಳುತ್ತಿದ್ದನೇನೋ! ಭರತ್ ಓಡಿ ಹೋಗಿ ತನ್ನ ಪ್ರೇಯಸಿಗೆ ಇಷ್ಟವಾದ ಜಿಲೇಬಿಯನ್ನು ರಾಮಣ್ಣನ ಅಂಗಡಿಯಲ್ಲಿ ಕಟ್ಟಿಸಿಕೊಂಡನು. ಭರತ್ ಮತ್ತು ಅವನ ಪ್ರೇಯಸಿ ಜಿಲೇಬಿ ತಿನ್ನುತಿದ್ದ ಅಂಗಡಿ ಅದು. ರಾಮಣ್ಣನೂ ಅಷ್ಟೇ ಅವರು ಬರುವುದನ್ನು ನೋಡಿದರೆ ಸಾಕು ಬಿಸಿ ಬಿಸಿ ಜಿಲೇಬಿಯನ್ನು ರೆಡಿಯಾಗಿಡುತ್ತಿದ್ದ.

ಭರತ್ ನ ವಿಷಯ ಅವನ ತ…

ಬ್ರೇಕಿಂಗ್ ನ್ಯೂಸ್ ಕಥೆ ಈಗ PDF formatನಲ್ಲಿ!

ಬ್ರೇಕಿಂಗ್ ನ್ಯೂಸ್ ಕಥೆ ಈಗ PDF formatನಲ್ಲಿ ಲಭ್ಯ! ಈಗಲೇ download ಮಾಡಿ ಓದಿ ಮತ್ತು ಇತರರಿಗೆ share ಮಾಡಿ!
Download ಮಾಡಲು ಇಲ್ಲಿ click ಮಾಡಿ